ಹಸಿರ ವನ-ಸಿರಿ..ಸು.ಮ.ಸುರೇಶ್

ಕಾವ್ಯ ಸಂಗಾತಿ

ಹಸಿರ ವನ-ಸಿರಿ..

ಸುರೇಶ ಮಲ್ಲಾಡದ..

ಮನಸ್ಸಿಗೆ ಮುದನೀಡುವ..
ಕಣ್ಣಿಗೆ ತಂಪನೀಯುವ..
ಹಸಿರ ವನಸಿರಿಯ ರೂಪಸಿಯೇ.
ಏನೆಂದು ಪೊಗಳಲಿ ನಿನ್ನ ಚೆಲುವ.
ನೀಲಿ-ಬಾನ ಹಂದರದೊಳ
ನಿನ್ನ ಮೊಗದಂದವ..

ಬಿರುಗಾಳಿಯ ತಡೆದು..
ಬಿಸಿ-ಗಾಳಿಯ ನಂಗಿ..
ನೆರಳ ಹಾಸಿ ತಂಪನೀಯುವೆ
ವಿಷವುಂಡು. ಸಿಹಿಯಾದ
ಆಮ್ಲಜನಕ ಕೊಡುವೆ..
ಕೆಡುಕ ಬಯಸುವ ಮನುಜನ
ಕಣ್ತೆರೆದು ನೋಡುತಲಿ..
ಮೌನವಾಗೇ ಸಹಿಸುವೆ..

ಮನೆಯ ಶೃಂಗರಿಸಲು.
ಗತ-ವೈಭವವ ಮೆರೆಯಲು.
ಅಧಿಕಾರ ಮಧದಿಂದಲಿ..
ದರ್ಪದೀ ಮೆರೆದವನು..


ನೆರಳಿತ್ತು ಸಲುಹಿದ.
ನಿನ್ನಡಿಗೆ ಕೊಡಲಿ ಇಟ್ಟವನು.

ದಟ್ಟವಾಗಿ ಹರಡಿ
ಭುವಿಯೊಡಲಿಗೆ ಹಸಿರ
ಸೀರೆಯನುಡಿಸಿರುವೆ..
ಸ್ವಾರ್ಥದಿಂ ನಿನ್ನೊಡಲ ಸೀಳಿ.
ಮನುಜ ನಿಶಾನೆ ಎಳೆದಿಹನು..
ಒಳಿತ ಮಾಡುವುದ ಮರೆತು.
ಸ್ವಾರ್ಥದಿ ಕೆಡುಕ ಬಯಸ್ಯಾನು..


Leave a Reply

Back To Top